13 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು) ಮಕ್ಕಳಿಗಾಗಿ, Family Link ಮೂಲಕ ನಿರ್ವಹಿಸಲಾದ Google ಖಾತೆಗಳು ಮತ್ತು ಪ್ರೊಫೈಲ್‌ಗಳಿಗಾಗಿ ಗೌಪ್ಯತೆ ಸೂಚನೆ (“ಗೌಪ್ಯತೆ ಸೂಚನೆ”)

ನಿಮ್ಮ ಮಗು ಅವರದೇ ಆದ ಸ್ವಂತ Google ಖಾತೆ ಅಥವಾ ಪ್ರೊಫೈಲ್ ಅನ್ನು ಹೊಂದಲು, ಗೌಪ್ಯತಾ ಸೂಚನೆ ಹಾಗೂ Google ಗೌಪ್ಯತಾ ನೀತಿಯಲ್ಲಿ ವಿವರಿಸಿರುವಂತೆ, ನಿಮ್ಮ ಮಗುವಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು, ಬಳಸಲು ಅಥವಾ ಬಹಿರಂಗಪಡಿಸಲು ನಮಗೆ ನಿಮ್ಮ ಅನುಮತಿಯ ಅಗತ್ಯವಿರಬಹುದು. ನಮ್ಮ ಸೇವೆಗಳನ್ನು ಬಳಸಲು ನಿಮ್ಮ ಮಗುವಿಗೆ ನೀವು ಅನುಮತಿ ನೀಡಿದಾಗ, ನಿಮ್ಮ ಮಾಹಿತಿಗೆ ಸಂಬಂಧಿಸಿದಂತೆ ನೀವು ಹಾಗೂ ನಿಮ್ಮ ಮಗು ನಮ್ಮ ಮೇಲೆ ವಿಶ್ವಾಸವಿರಿಸುತ್ತೀರಿ. ಇದು ದೊಡ್ಡ ಜವಾಬ್ದಾರಿ ಎಂಬುದರ ಅರಿವು ನಮಗಿದೆ ಮತ್ತು ನಿಮ್ಮ ಮಾಹಿತಿಯನ್ನು ಸಂರಕ್ಷಿಸಲು ಹಾಗೂ ಅದರ ನಿಯಂತ್ರಣವನ್ನು ನಿಮ್ಮ ಕೈಗೆ ಕೊಡಲು ನಾವು ಶ್ರಮವಹಿಸಿ ಕೆಲಸ ಮಾಡುತ್ತೇವೆ. ವೆಬ್ ಮತ್ತು ಆ್ಯಪ್ ಚಟುವಟಿಕೆ, YouTube ಇತಿಹಾಸ ಮತ್ತು ಅನ್ವಯವಾಗುವ ಪ್ರದೇಶಗಳಲ್ಲಿ, ಕೆಲವು Google ಸೇವೆಗಳನ್ನು ಲಿಂಕ್ ಮಾಡುವಂತಹ ವಿಷಯಗಳಿಗೆ ಸಂಬಂಧಿಸಿದ ಅವರ ಚಟುವಟಿಕೆ ನಿಯಂತ್ರಣಗಳನ್ನು ನಿಮ್ಮ ಮಗು ನಿರ್ವಹಿಸಬಹುದೇ ಎಂಬುದನ್ನು ನೀವು ಆಯ್ಕೆಮಾಡಬಹುದು.

13 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು) ಮಕ್ಕಳಿಗಾಗಿ Family Link ಮೂಲಕ ನಿರ್ವಹಿಸಲಾದ Google ಖಾತೆಗಳು ಮತ್ತು ಪ್ರೊಫೈಲ್‌ಗಳಿಗೆ ಸಂಬಂಧಿಸಿದ ಈ ಗೌಪ್ಯತಾ ಸೂಚನೆ ಮತ್ತು Google ಗೌಪ್ಯತೆ ನೀತಿಯು Google ನ ಗೌಪ್ಯತೆಯ ರೂಢಿಗಳನ್ನು ವಿವರಿಸುತ್ತದೆ. ವೈಯಕ್ತೀಕರಿಸಿದ ಜಾಹೀರಾತುಗಳ ಮೇಲಿನ ಮಿತಿಗಳಿಗೆ ಸಂಬಂಧಿಸಿದಂತೆ ನಿಮ್ಮ ಮಗುವಿನ ಖಾತೆ ಅಥವಾ ಪ್ರೊಫೈಲ್‌ಗೆ ನಿರ್ದಿಷ್ಟವಾದ ಗೌಪ್ಯತೆ ರೂಢಿಗಳಿದ್ದು, ಈ ವ್ಯತ್ಯಾಸಗಳ ಕುರಿತು ಈ ಗೌಪ್ಯತೆ ಸೂಚನೆಯಲ್ಲಿ ವಿವರಿಸಲಾಗಿದೆ.

ನಿಮ್ಮ ಮಗು ಬಳಸಬಹುದಾದ ಯಾವುದೇ ಥರ್ಡ್ ಪಾರ್ಟಿ (Google ಗೆ ಸಂಬಂಧಿಸಿರದ) ಆ್ಯಪ್‌ಗಳು, ಕ್ರಿಯೆಗಳು ಅಥವಾ ವೆಬ್‍ಸೈಟ್‌ಗಳ ಅಭ್ಯಾಸಗಳಿಗೆ ಈ ಗೌಪ್ಯತಾ ಸೂಚನೆಯು ಅನ್ವಯವಾಗುವುದಿಲ್ಲ. ಥರ್ಡ್-ಪಾರ್ಟಿ ಆ್ಯಪ್‌ಗಳು, ಕ್ರಿಯೆಗಳು ಮತ್ತು ಸೈಟ್‌ಗಳು ನಿಮ್ಮ ಮಗುವಿಗೆ ಸೂಕ್ತವಾಗಿವೆಯೇ ಎಂಬುದನ್ನು ನಿರ್ಧರಿಸಲು, ಅವರ ಡೇಟಾ ಸಂಗ್ರಹ ಮತ್ತು ಬಳಕೆಯ ಅಭ್ಯಾಸಗಳೂ ಸೇರಿದಂತೆ, ಅನ್ವಯಿಸುವ ನಿಯಮಗಳು ಮತ್ತು ನೀತಿಗಳನ್ನು ನೀವು ಪರಿಶೀಲಿಸಬೇಕು.

ನಾವು ಸಂಗ್ರಹಿಸುವ ಮಾಹಿತಿ

ನಿಮ್ಮ ಮಗುವಿಗೆ Google ಖಾತೆ ಅಥವಾ ಪ್ರೊಫೈಲ್ ಅನ್ನು ಹೊಂದಲು ನೀವು ಒಮ್ಮೆ ಅನುಮತಿಯನ್ನು ನೀಡಿದರೆ, ನಾವು ಸಂಗ್ರಹಿಸುವ ಮಾಹಿತಿಗೆ ಸಂಬಂಧಿಸಿದಂತೆ ಅವರ ಖಾತೆಯನ್ನು ಸಾಮಾನ್ಯವಾಗಿ ನಿಮ್ಮದೇ ಖಾತೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನಾವು ಇವುಗಳನ್ನು ಸಂಗ್ರಹಿಸುತ್ತೇವೆ:

ನೀವು ಮತ್ತು ನಿಮ್ಮ ಮಗು ರಚಿಸುವ ಅಥವಾ ನಮಗೆ ಒದಗಿಸುವ ಮಾಹಿತಿ.

ಖಾತೆ ಅಥವಾ ಪ್ರೊಫೈಲ್ ರಚನೆಯ ಪ್ರಕ್ರಿಯೆಯ ಭಾಗವಾಗಿ, ಮೊದಲ ಹೆಸರು ಮತ್ತು ಕೊನೆಯ ಹೆಸರು, ಇಮೇಲ್ ವಿಳಾಸ ಹಾಗೂ ಜನ್ಮದಿನಾಂಕದಂತಹ ವೈಯಕ್ತಿಕ ಮಾಹಿತಿಯನ್ನು ನಾವು ಕೇಳಬಹುದು. ನೀವು ಅಥವಾ ನಿಮ್ಮ ಮಗು ಒದಗಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ, ಸಮ್ಮತಿಯನ್ನು ವಿನಂತಿಸುವುದಕ್ಕೆ ನಿಮ್ಮನ್ನು ಸಂಪರ್ಕಿಸಲು ನಮಗೆ ಅಗತ್ಯವಿರುವ ನಿಮ್ಮ ಆನ್‌ಲೈನ್ ಸಂಪರ್ಕ ವಿವರಗಳು. ನಿಮ್ಮ ಮಗು ತಮ್ಮ ಖಾತೆ ಅಥವಾ ಪ್ರೊಫೈಲ್ ಅನ್ನು ಬಳಸುವಾಗ, ಉದಾಹರಣೆಗೆ Google Photos ನಲ್ಲಿ ಚಿತ್ರವನ್ನು ಉಳಿಸುವಾಗ ಅಥವಾ Google Drive ನಲ್ಲಿ ಡಾಕ್ಯುಮೆಂಟ್ ರಚಿಸುವಾಗ, ಅವರು ರಚಿಸುವ, ಅಪ್‌ಲೋಡ್ ಮಾಡುವ ಅಥವಾ ಇತರರಿಂದ ಪಡೆಯುವ ಮಾಹಿತಿಯನ್ನು ಕೂಡಾ ನಾವು ಸಂಗ್ರಹಿಸುತ್ತೇವೆ.

ನಮ್ಮ ಸೇವೆಗಳನ್ನು ನಿಮ್ಮ ಮಗು ಬಳಸುವ ಮೂಲಕ ನಮಗೆ ದೊರಕುವ ಮಾಹಿತಿ.

ನಿಮ್ಮ ಮಗು ಯಾವ ಸೇವೆಗಳನ್ನು ಬಳಸುತ್ತದೆ ಮತ್ತು ಅವುಗಳನ್ನು ಹೇಗೆ ಬಳಸುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ ಮತ್ತು ಸಂಗ್ರಹಣೆ ಮಾಡುತ್ತೇವೆ. ಉದಾಹರಣೆಗೆ, ನಿಮ್ಮ ಮಗು Google Search ನಲ್ಲಿ ಪ್ರಶ್ನೆಯನ್ನು ನಮೂದಿಸಿದಾಗ, Google Assistant ಜೊತೆಗೆ ಮಾತನಾಡಿದಾಗ ಅಥವಾ YouTube Kids ನಲ್ಲಿ ವೀಡಿಯೊವನ್ನು ವೀಕ್ಷಿಸಿದಾಗ ನಾವು ಕೆಲವೊಂದು ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಈ ಮಾಹಿತಿ ಇದನ್ನೂ ಒಳಗೊಂಡಿರುತ್ತದೆ:

 • ನಿಮ್ಮ ಮಗುವಿನ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳು

  ಅನನ್ಯ ಐಡೆಂಟಿಫೈಯರ್‌ಗಳು, ಬ್ರೌಸರ್ ವಿಧ ಮತ್ತು ಸೆಟ್ಟಿಂಗ್‌ಗಳು, ಸಾಧನದ ವಿಧ ಮತ್ತು ಸೆಟ್ಟಿಂಗ್‌ಗಳು, ಆಪರೇಟಿಂಗ್ ಸಿಸ್ಟಂ ಮಾತ್ರವಲ್ಲದೆ ವಾಹಕದ ಹೆಸರು ಹಾಗೂ ಫೋನ್ ಸಂಖ್ಯೆ ಮತ್ತು ಅಪ್ಲಿಕೇಶನ್ ಆವೃತ್ತಿ ಸಂಖ್ಯೆಯಂತಹ ಮೊಬೈಲ್ ನೆಟ್‌ವರ್ಕ್ ಮಾಹಿತಿಯೂ ಸೇರಿದಂತೆ, Google ಸೇವೆಗಳನ್ನು ಪ್ರವೇಶಿಸಲು ನಿಮ್ಮ ಮಗು ಬಳಸುವ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳ ಕುರಿತಾದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. IP ವಿಳಾಸ, ಕ್ರ್ಯಾಶ್ ವರದಿಗಳು, ಸಿಸ್ಟಂ ಚಟುವಟಿಕೆ ಮತ್ತು ನಿಮ್ಮ ಮಗು ವಿನಂತಿಸಿದ ದಿನಾಂಕ, ಸಮಯ ಮತ್ತು ರೆಫರ್ ಮಾಡಿದ URL ಸೇರಿದಂತೆ ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸುವ ನಿಮ್ಮ ಮಗುವಿನ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳನ್ನು ಕುರಿತ ಮಾಹಿತಿಯನ್ನು ಸಹ ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಿಮ್ಮ ಮಗುವು Play Store ನಿಂದ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡಿದ ಸಂದರ್ಭದಲ್ಲಿ ಅವರ ಸಾಧನದಲ್ಲಿರುವ Google ಸೇವೆಯು ನಮ್ಮ ಸರ್ವರ್‌ಗಳನ್ನು ಸಂಪರ್ಕಿಸಿದಾಗ ನಾವು ಈ ಮಾಹಿತಿಯನ್ನು ಸಂಗ್ರಹಿಸುತ್ತೇವೆ.

 • ನಿಮ್ಮ ಮಗುವಿನ ಚಟುವಟಿಕೆ

  ನಮ್ಮ ಸೇವೆಗಳಲ್ಲಿ ನಿಮ್ಮ ಮಗುವಿನ ಚಟುವಟಿಕೆಯಂತಹ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ನಿಮ್ಮ ಮಗುವಿನ ಸೆಟ್ಟಿಂಗ್‌ಗಳನ್ನು ಆಧರಿಸಿ, ಅವರು Google Play ನಲ್ಲಿ ಅವರಿಗೆ ಇಷ್ಟವಾಗಬಹುದಾದ ಆ್ಯಪ್‌ಗಳನ್ನು ಶಿಫಾರಸು ಮಾಡುವಂತಹ ವಿಷಯಗಳಿಗಾಗಿ ನಾವು ಇದನ್ನು ಬಳಸುತ್ತೇವೆ. ನಿಮ್ಮ ಮಗುವು ತನ್ನ ಚಟುವಟಿಕೆ ನಿಯಂತ್ರಣಗಳನ್ನು ನಿರ್ವಹಿಸಬಹುದೇ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನಾವು ಸಂಗ್ರಹಿಸುವ ನಿಮ್ಮ ಮಗುವಿನ ಚಟುವಟಿಕೆಯ ಮಾಹಿತಿಯಲ್ಲಿ ಹುಡುಕಾಟ ಪದಗಳು, ಅವರು ವೀಕ್ಷಿಸುವ ವೀಡಿಯೊಗಳು, ಅವರು ಆಡಿಯೊ ಫೀಚರ್‌ಗಳನ್ನು ಬಳಸುವಾಗ ಧ್ವನಿ ಮತ್ತು ಆಡಿಯೊ ಮಾಹಿತಿ, ಅವರು ಯಾರೊಂದಿಗೆ ಸಂವಹನ ಮಾಡುತ್ತಾರೆ ಅಥವಾ ಕಂಟೆಂಟ್ ಅನ್ನು ಹಂಚಿಕೊಳ್ಳುತ್ತಾರೆ ಎಂಬುದು ಮತ್ತು ತಮ್ಮ Google ಖಾತೆಯೊಂದಿಗೆ ಅವರು ಸಿಂಕ್ ಮಾಡಿರುವ Chrome ಬ್ರೌಸಿಂಗ್ ಇತಿಹಾಸವೂ ಸೇರಿರಬಹುದು. ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅಥವಾ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ನಿಮ್ಮ ಮಗು Google Meet ಅಥವಾ Duo ನಂತಹ ನಮ್ಮ ಸೇವೆಗಳನ್ನು ಬಳಸಿದರೆ, ನಾವು ಕರೆ ಲಾಗ್ ಮಾಹಿತಿಯನ್ನು ಸಂಗ್ರಹಿಸಬಹುದು. ನಿಮ್ಮ ಮಗು ತಮ್ಮ ಖಾತೆ ಅಥವಾ ಪ್ರೊಫೈಲ್‌ನಲ್ಲಿ ಉಳಿಸಲಾದ ಚಟುವಟಿಕೆಯ ಮಾಹಿತಿಯನ್ನು ಹುಡುಕಲು ಮತ್ತು ನಿರ್ವಹಿಸಲು ಅವರ Google ಖಾತೆಗೆ ಭೇಟಿ ನೀಡಬಹುದು ಮತ್ತು ನಿಮ್ಮ ಮಗುವಿನ Google ಖಾತೆಗೆ ಸೈನ್ ಇನ್ ಮಾಡುವ ಮೂಲಕ ಅಥವಾ Family Link ನಲ್ಲಿ ಅವರ ಪ್ರೊಫೈಲ್ ಅನ್ನು ಪ್ರವೇಶಿಸುವ ಮೂಲಕ ಅವರ ಚಟುವಟಿಕೆ ಮಾಹಿತಿಯನ್ನು ನಿರ್ವಹಿಸಲು ಸಹ ನೀವು ಸಹಾಯ ಮಾಡಬಹುದು.

 • ನಿಮ್ಮ ಮಗುವಿನ ಸ್ಥಳದ ಮಾಹಿತಿ

  ನಿಮ್ಮ ಮಗು ನಮ್ಮ ಸೇವೆಗಳನ್ನು ಬಳಸುವಾಗ, ಅವರ ಸ್ಥಳದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ನಿಮ್ಮ ಮಗುವಿನ ಸಾಧನದ GPS, IP ವಿಳಾಸ, ಸೆನ್ಸರ್ ಡೇಟಾ ಹಾಗೂ ಅವರ ಸಾಧನದ ಸಮೀಪದಲ್ಲಿರುವ ಸಂಗತಿಗಳು, ಉದಾಹರಣೆಗೆ ವೈ-ಫೈ ಆ್ಯಕ್ಸೆಸ್ ಪಾಯಿಂಟ್‌ಗಳು, ಸೆಲ್ ಟವರ್‌ಗಳು ಹಾಗೂ ಬ್ಲೂಟೂತ್-ಸಕ್ರಿಯ ಸಾಧನಗಳ ಮಾಹಿತಿಯ ಮೂಲಕ ನಿಮ್ಮ ಮಗುವಿನ ಸ್ಥಳವನ್ನು ನಿರ್ಧರಿಸಬಹುದು. ನಾವು ಸಂಗ್ರಹಿಸುವ ಸ್ಥಳ ಡೇಟಾದ ಪ್ರಕಾರಗಳು ನಿಮ್ಮ ಸೆಟ್ಟಿಂಗ್‌ಗಳು ಮತ್ತು ನಿಮ್ಮ ಮಗುವಿನ ಸಾಧನಗಳ ಮೇಲೆ ಭಾಗಶಃ ಅವಲಂಬಿತವಾಗಿರುತ್ತದೆ.

 • ನಿಮ್ಮ ಮಗುವಿನ ಧ್ವನಿ ಮತ್ತು ಆಡಿಯೋ ಮಾಹಿತಿ

  ನಿಮ್ಮ ಮಗುವಿನ ಧ್ವನಿ ಮತ್ತು ಆಡಿಯೋ ಮಾಹಿತಿಯನ್ನು ನಾವು ಸಂಗ್ರಹಿಸಬಹುದು. ಉದಾಹರಣೆಗೆ, ನಿಮ್ಮ ಮಗು ಆಡಿಯೊ ಸಕ್ರಿಯಗೊಳಿಸುವಿಕೆ ಕಮಾಂಡ್ ಬಳಸುತ್ತಿದ್ದರೆ (ಉದಾ. “OK Google” ಎಂದಾಗ ಅಥವಾ ಮೈಕ್ರೊಫೋನ್ ಐಕಾನ್ ಅನ್ನು ಸ್ಪರ್ಶಿಸಿದಾಗ), ಅವರ ವಿನಂತಿಗೆ ಪ್ರತಿಕ್ರಿಯಿಸುವ ಸಲುವಾಗಿ ಈ ಕೆಳಗಿನ ಧ್ವನಿ/ಆಡಿಯೋದ ರೆಕಾರ್ಡಿಂಗ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಜೊತೆಗೆ, ವೆಬ್ ಮತ್ತು ಆ್ಯಪ್ ಚಟುವಟಿಕೆಯ ಸೆಟ್ಟಿಂಗ್‌ಗಳ ಅಡಿಯಲ್ಲಿ ನಿಮ್ಮ ಮಗುವಿನ ಧ್ವನಿ ಮತ್ತು ಆಡಿಯೋ ಚಟುವಟಿಕೆ ಆಯ್ಕೆಯನ್ನು ಗುರುತು ಮಾಡಿದ್ದರೆ, ಸೈನ್ ಇನ್ ಮಾಡಿರುವ ಸಾಧನದಲ್ಲಿ ಅವರು Assistant ಜೊತೆ ನಡೆಸಿರುವ ಧ್ವನಿ ಸಂವಹನದ ರೆಕಾರ್ಡಿಂಗ್ (ಜೊತೆಗೆ ಕೆಲವು ಸೆಕೆಂಡ್‌ಗಳಷ್ಟು ಮುಂಚಿತ ಸಮಯದ ರೆಕಾರ್ಡಿಂಗ್) ಅನ್ನು ಅವರ ಖಾತೆಯಲ್ಲಿ ಉಳಿಸಬಹುದು.

ನಿಮ್ಮ ಮಗುವಿನ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಸಂಗ್ರಹಣೆ ಮಾಡಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು ಮಾತ್ರವಲ್ಲದೆ ಬ್ರೌಸರ್ ವೆಬ್ ಸಂಗ್ರಹಣೆ ಅಥವಾ ಅಪ್ಲಿಕೇಶನ್ ಡೇಟಾ ಕ್ಯಾಷ್‌ಗಳು, ಡೇಟಾಬೇಸ್‌ಗಳು ಮತ್ತು ಸರ್ವರ್ ಲಾಗ್‌ಗಳಂತಹ ಸ್ಥಳೀಯ ಸಂಗ್ರಹಣೆಯೂ ಸೇರಿದಂತೆ, ವಿವಿಧ ತಂತ್ರಜ್ಞಾನಗಳನ್ನು ನಾವು ಬಳಸುತ್ತೇವೆ. ಈ ಖಾತೆಗಳಿಗೆ ಅಥವಾ ಪ್ರೊಫೈಲ್‌ಗಳಿಗೆ ಲಭ್ಯವಿರುವ Google ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಲು, ನ್ಯಾಯೋಚಿತವಾಗಿ ಅಗತ್ಯವಿರುವುದನ್ನು ಹೊರತುಪಡಿಸಿ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನಿಮ್ಮ ಮಗು ಒದಗಿಸುವ ಅಗತ್ಯವಿಲ್ಲ.

ಸಂಗ್ರಹಿಸುವ ಮಾಹಿತಿಯನ್ನು ನಾವು ಬಳಸಿಕೊಳ್ಳುವ ಬಗೆ

ನಿಮ್ಮ ಮಗುವಿನ Google ಖಾತೆ ಅಥವಾ ಪ್ರೊಫೈಲ್‌ಗೆ ಸಂಬಂಧಿಸಿದಂತೆ Google ಸಂಗ್ರಹಿಸುವ ಡೇಟಾವನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು Google ನ ಗೌಪ್ಯತೆ ನೀತಿ ಬಹಳ ವಿಸ್ತಾರವಾಗಿ ವಿವರಿಸುತ್ತದೆ. ಸಾಮಾನ್ಯವಾಗಿ, ನಮ್ಮ ಸೇವೆಗಳನ್ನು ಒದಗಿಸಲು, ನಿರ್ವಹಿಸಲು ಮತ್ತು ಸುಧಾರಿಸಲು; ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು; ನಿಮ್ಮ ಮಗುವಿಗಾಗಿ ನಮ್ಮ ಸೇವೆಗಳನ್ನು ಕಸ್ಟಮೈಸ್ ಮಾಡಲು; ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು; ನಮ್ಮ ಸೇವೆಗಳಿಗೆ ಸಂಬಂಧಿಸಿದಂತೆ ನಿಮ್ಮ ಮಗುವಿನ ಜೊತೆಗೆ ನೇರವಾಗಿ ಸಂವಹಿಸಲು; ಮತ್ತು ನಮ್ಮ ಸೇವೆಗಳ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಸುಧಾರಿಸಲು ನಿಮ್ಮ ಮಗುವಿನ ಮಾಹಿತಿಯನ್ನು ನಾವು ಬಳಸುತ್ತೇವೆ.

ಈ ಉದ್ದೇಶಗಳಿಗಾಗಿ ನಿಮ್ಮ ಮಗುವಿನ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು ನಾವು ವಿಭಿನ್ನ ತಂತ್ರಜ್ಞಾನಗಳನ್ನು ಬಳಸುತ್ತೇವೆ. ನಿಮ್ಮ ಮಗು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತದೆ ಎಂಬುದಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಹುಡುಕಾಟದ ಫಲಿತಾಂಶಗಳು ಅಥವಾ ಇತರ ವೈಶಿಷ್ಟ್ಯಗಳನ್ನು ಒದಗಿಸಲು, ಅವರ ಕಂಟೆಂಟ್ ಅನ್ನು ವಿಶ್ಲೇಷಿಸುವ ಸ್ವಯಂಚಾಲಿತ ವ್ಯವಸ್ಥೆಗಳನ್ನು ನಾವು ಬಳಸುತ್ತೇವೆ. ಮತ್ತು ಸ್ಪ್ಯಾಮ್, ಮಾಲ್‌ವೇರ್ ಹಾಗೂ ಕಾನೂನುಬಾಹಿರ ಕಂಟೆಂಟ್ ಅನ್ನು ಪತ್ತೆಹಚ್ಚಲು ನಮಗೆ ಸಹಾಯವಾಗುವಂತೆ ನಿಮ್ಮ ಮಗುವಿನ ಕಂಟೆಂಟ್ ಅನ್ನು ನಾವು ವಿಶ್ಲೇಷಿಸುತ್ತೇವೆ. ಡೇಟಾದಲ್ಲಿ ವಿನ್ಯಾಸಗಳನ್ನು ಗುರುತಿಸಲು ನಾವು ಅಲ್ಗಾರಿದಮ್‌ಗಳನ್ನು ಕೂಡಾ ಬಳಸುತ್ತೇವೆ. ನಮ್ಮ ಸಿಸ್ಟಮ್‌ಗಳಲ್ಲಿ, ನಮ್ಮ ಕಾರ್ಯನೀತಿಗಳನ್ನು ಉಲ್ಲಂಘಿಸುವಂತಹ ಸ್ಪ್ಯಾಮ್, ಮಾಲ್‌ವೇರ್, ಕಾನೂನುಬಾಹಿರ ಕಂಟೆಂಟ್ ಅಥವಾ ಇತರ ರೀತಿಯ ದುರ್ಬಳಕೆಗಳನ್ನು ನಾವು ಪತ್ತೆಹಚ್ಚಿದರೆ, ನಾವು ಅವರ ಖಾತೆ ಅಥವಾ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಸೂಕ್ತವಾದ ಇತರ ಕ್ರಮ ಕೈಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಉಲ್ಲಂಘನೆಯ ಕುರಿತು ನಾವು ಸೂಕ್ತ ಪ್ರಾಧಿಕಾರಗಳಿಗೆ ವರದಿಯನ್ನು ಸಹ ಮಾಡಬಹುದು.

ನಿಮ್ಮ ಮಗುವಿನ ಸೆಟ್ಟಿಂಗ್‌ಗಳನ್ನು ಆಧರಿಸಿ, ಶಿಫಾರಸುಗಳು, ವೈಯಕ್ತೀಕರಿಸಿದ ಕಂಟೆಂಟ್ ಮತ್ತು ಕಸ್ಟಮೈಸ್ ಮಾಡಿದ ಹುಡುಕಾಟದ ಫಲಿತಾಂಶಗಳನ್ನು ಒದಗಿಸಲು ನಿಮ್ಮ ಮಗುವಿನ ಮಾಹಿತಿಯನ್ನು ನಾವು ಬಳಸಬಹುದು. ಉದಾಹರಣೆಗೆ, ನಿಮ್ಮ ಮಗುವಿನ ಸೆಟ್ಟಿಂಗ್‌ಗಳನ್ನು ಆಧರಿಸಿ, ಅವರಿಗೆ ಇಷ್ಟವಾಗಬಹುದಾದ ಆ್ಯಪ್‌ಗಳನ್ನು ಕುರಿತು ಸಲಹೆ ನೀಡಲು, ನಿಮ್ಮ ಮಗು ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳಂತಹ ಮಾಹಿತಿಯನ್ನು Google Play ಬಳಸಬಹುದು.

ಹೆಚ್ಚುವರಿಯಾಗಿ, ನಿಮ್ಮ ಮಗುವಿನ ಸೆಟ್ಟಿಂಗ್‌ಗಳನ್ನು ಆಧರಿಸಿ, ಮೇಲೆ ವಿವರಿಸಿದ ಉದ್ದೇಶಗಳಿಗಾಗಿ ನಮ್ಮ ಸೇವೆಗಳಲ್ಲಿ ಮತ್ತು ನಿಮ್ಮ ಮಗುವಿನ ಸಾಧನಗಳಾದ್ಯಂತ ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಸಂಯೋಜಿಸಬಹುದು. Google ನ ಸೇವೆಗಳನ್ನು ಸುಧಾರಿಸುವುದಕ್ಕಾಗಿ, ನಿಮ್ಮ ಮಗುವಿನ ಖಾತೆ ಅಥವಾ ಪ್ರೊಫೈಲ್ ಸೆಟ್ಟಿಂಗ್‌ಗಳನ್ನು ಆಧರಿಸಿ, ಇತರ ಸೈಟ್‌ಗಳು ಹಾಗೂ ಆ್ಯಪ್‌ಗಳಲ್ಲಿ ಅವರು ನಡೆಸುವ ಚಟುವಟಿಕೆಯನ್ನು ಅವರ ವೈಯಕ್ತಿಕ ಮಾಹಿತಿಯೊಂದಿಗೆ ಸಂಯೋಜಿಸಬಹುದು.

Google ನಿಮ್ಮ ಮಗುವಿಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸುವುದಿಲ್ಲ, ಎಂದರೆ ಜಾಹೀರಾತುಗಳು ನಿಮ್ಮ ಮಗುವಿನ ಖಾತೆ ಅಥವಾ ಪ್ರೊಫೈಲ್‌ನಲ್ಲಿನ ಮಾಹಿತಿಯನ್ನು ಆಧರಿಸಿರುವುದಿಲ್ಲ. ಬದಲಿಗೆ, ನಿಮ್ಮ ಮಗು ವೀಕ್ಷಿಸುತ್ತಿರುವ ವೆಬ್‌ಸೈಟ್ ಅಥವಾ ಆ್ಯಪ್‌ನ ಕಂಟೆಂಟ್, ಪ್ರಸ್ತುತ ಹುಡುಕಾಟದ ಪ್ರಶ್ನೆ ಅಥವಾ ಸಾಮಾನ್ಯ ಸ್ಥಳದಂತಹ (ನಗರ ಅಥವಾ ರಾಜ್ಯ) ಮಾಹಿತಿಯನ್ನು ಜಾಹೀರಾತುಗಳು ಆಧರಿಸಿರಬಹುದು. ವೆಬ್ ಬ್ರೌಸ್ ಮಾಡುವಾಗ ಅಥವಾ Google ಅಲ್ಲದ ಆ್ಯಪ್‌ಗಳನ್ನು ಬಳಸುವಾಗ, ಥರ್ಡ್ ಪಾರ್ಟಿಗಳು ವೈಯಕ್ತೀಕರಿಸಿರುವ ಜಾಹೀರಾತುಗಳು ಸೇರಿದಂತೆ, ಇತರ (Google ಅಲ್ಲದ) ಜಾಹೀರಾತು ಪೂರೈಕೆದಾರರು ಒದಗಿಸಿದ ಜಾಹೀರಾತುಗಳನ್ನು ನಿಮ್ಮ ಮಗು ನೋಡಬಹುದು.

ನಿಮ್ಮ ಮಗು ಹಂಚಿಕೊಳ್ಳಬಹುದಾದ ಮಾಹಿತಿ

ನಿಮ್ಮ ಮಗು ತಮ್ಮ Google ಖಾತೆ ಅಥವಾ ಪ್ರೊಫೈಲ್‌ಗೆ ಸೈನ್ ಇನ್ ಮಾಡಿದಾಗ ಫೋಟೋಗಳು, ವೀಡಿಯೊಗಳು, ಆಡಿಯೊ ಮತ್ತು ಸ್ಥಳದಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ. ನಿಮ್ಮ ಮಗು, ಸಾರ್ವಜನಿಕವಾಗಿ ಮಾಹಿತಿಯನ್ನು ಹಂಚಿಕೊಂಡಾಗ, Google Search ನಂತಹ ಹುಡುಕಾಟ ಎಂಜಿನ್‌ಗಳ ಮೂಲಕ ಅದನ್ನು ಪ್ರವೇಶಿಸಲು ಸಾಧ್ಯವಾಗಬಹುದು.

Google ಹಂಚಿಕೊಳ್ಳುವ ಮಾಹಿತಿ

ನಾವು ಸಂಗ್ರಹಿಸುವ ಮಾಹಿತಿಯನ್ನು, ಸೀಮಿತ ಸಂದರ್ಭಗಳಲ್ಲಿ Google ಹೊರಗಡೆ ಹಂಚಿಕೊಳ್ಳಬಹುದು. ಈ ಕೆಳಗಿನ ಸಂದರ್ಭಗಳನ್ನು ಹೊರತುಪಡಿಸಿ, ವೈಯಕ್ತಿಕ ಮಾಹಿತಿಯನ್ನು Google ಗೆ ಹೊರತಾದ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ನಾವು ಹಂಚಿಕೊಳ್ಳುವುದಿಲ್ಲ:

ಸಮ್ಮತಿಯೊಂದಿಗೆ

ನೀವು ಸಮ್ಮತಿಸಿದರೆ (ಅನ್ವಯಿಸಿದಂತೆ) ವೈಯಕ್ತಿಕ ಮಾಹಿತಿಯನ್ನು Google ನ ಹೊರಗಿನವರೊಂದಿಗೆ ನಾವು ಹಂಚಿಕೊಳ್ಳುತ್ತೇವೆ.

ನಿಮ್ಮ ಕುಟುಂಬದ ಗುಂಪಿನೊಂದಿಗೆ

ನಿಮ್ಮ ಮಗುವಿನ ಹೆಸರು, ಫೋಟೋ, ಇಮೇಲ್ ವಿಳಾಸ ಮತ್ತು Play ಖರೀದಿಗಳೂ ಸೇರಿದಂತೆ, ಅವರ ಮಾಹಿತಿಯನ್ನು Google ನಲ್ಲಿ ನಿಮ್ಮ ಕುಟುಂಬದ ಗುಂಪಿನೊಂದಿಗೆ ಹಂಚಿಕೊಳ್ಳಬಹುದು.

ಬಾಹ್ಯ ಪ್ರಕ್ರಿಯೆಗೊಳಿಸುವಿಕೆಗಾಗಿ

ನಮ್ಮ ಸೂಚನೆಗಳನ್ನು ಆಧರಿಸಿ ಮತ್ತು ಈ ಗೌಪ್ಯತೆ ಸೂಚನೆ, Google ಗೌಪ್ಯತಾ ನೀತಿ ಹಾಗೂ ಇತರ ಯಾವುದೇ ಸೂಕ್ತವಾದ ಗೌಪ್ಯತಾ ಹಾಗೂ ಭದ್ರತಾ ಕ್ರಮಗಳಿಗೆ ಅನುಗುಣವಾಗಿ, ನಮಗಾಗಿ ಇದನ್ನು ಪ್ರಕ್ರಿಯೆಗೊಳಿಸುವ ನಮ್ಮ ಅಂಗಸಂಸ್ಥೆಗಳು ಮತ್ತು ಇತರ ವಿಶ್ವಾಸಾರ್ಹ ವ್ಯಾಪಾರಗಳು ಅಥವಾ ವ್ಯಕ್ತಿಗಳಿಗೆ ವೈಯಕ್ತಿಕ ಮಾಹಿತಿಯನ್ನು ನಾವು ಒದಗಿಸುತ್ತೇವೆ.

ಕಾನೂನು ಕಾರಣಗಳಿಗಾಗಿ

ನಾವು ಆ್ಯಕ್ಸೆಸ್, ಬಳಕೆ, ಮಾಹಿತಿಯ ಸಂರಕ್ಷಣೆ ಅಥವಾ ಮಾಹಿತಿ ಬಹಿರಂಗಪಡಿಸುವಿಕೆಯು ಈ ಮುಂದಿನದಕ್ಕೆ ಸಮಂಜಸವಾಗಿ ಅಗತ್ಯವಿದೆ ಎಂಬ ಉತ್ತಮ ನಂಬಿಕೆಯನ್ನು ಹೊಂದಿದ್ದರೆ, ನಾವು ಕಂಪನಿಗಳು, ಸಂಸ್ಥೆಗಳು ಅಥವಾ Google ಹೊರಗಿನ ವ್ಯಕ್ತಿಗಳ ಜೊತೆಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ:

 • ಯಾವುದೇ ಅನ್ವಯವಾಗುವ ನೀತಿ, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಕಾನೂನು ಜಾರಿಗೊಳಿಸುವಂತಹ ಸರ್ಕಾರಿ ವಿನಂತಿಯನ್ನು ಪೂರೈಸಲು;

 • ಸಂಭಾವ್ಯ ಉಲ್ಲಂಘನೆಗಳ ತನಿಖೆ ಸೇರಿದಂತೆ, ಅನ್ವಯವಾಗುವ ಸೇವಾ ನಿಯಮಗಳನ್ನು ಜಾರಿಗೊಳಿಸಲು;

 • ವಂಚನೆ, ಸುರಕ್ಷತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಇಲ್ಲವೇ ಬಗೆಹರಿಸಲು;

 • ಕಾನೂನಿನ ಮೂಲಕ ಅಗತ್ಯವಿರುವ ಅಥವಾ ಅನುಮತಿ ಪಡೆದಿರುವ Google ನ, ನಮ್ಮ ಬಳಕೆದಾರರ ಇಲ್ಲವೇ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆಯ ಧಕ್ಕೆಗೆ ವಿರುದ್ದವಾಗಿ ಸಂರಕ್ಷಿಸಲು.

ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು (ಉದಾಹರಣೆಗೆ, ನಮ್ಮ ಸೇವೆಗಳ ಸಾಮಾನ್ಯ ಬಳಕೆಗೆ ಸಂಬಂಧಿಸಿದ ಟ್ರೆಂಡ್‌ಗಳು) ನಾವು ಸಾರ್ವಜನಿಕವಾಗಿ ಮತ್ತು ನಮ್ಮ ಪಾಲುದಾರರೊಂದಿಗೆ — ಅಂದರೆ ಪ್ರಕಾಶಕರು, ಜಾಹೀರಾತುದಾರರು, ಡೆವಲಪರ್‌ಗಳು ಅಥವಾ ಷೇರುದಾರರೊಂದಿಗೆ ಕೂಡಾ ನಾವು ಹಂಚಿಕೊಳ್ಳಬಹುದು. ಉದಾಹರಣೆಗೆ, ನಮ್ಮ ಸೇವೆಗಳ ಸಾಮಾನ್ಯ ಬಳಕೆಯ ಕುರಿತಾದ ಟ್ರೆಂಡ್‌ಗಳನ್ನು ತೋರಿಸಲು ನಾವು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇವೆ. ಜಾಹೀರಾತು ಅಥವಾ ಮಾಪನದ ಉದ್ದೇಶಗಳಿಗಾಗಿ ಬ್ರೌಸರ್‌ಗಳು ಅಥವಾ ಸಾಧನಗಳಿಂದ, ಅವರದ್ದೇ ಆದ ಕುಕೀಗಳು ಅಥವಾ ಅದೇ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಹಿತಿಯನ್ನು ಸಂಗ್ರಹಿಸಲು, ನಾವು ನಿರ್ದಿಷ್ಟ ಪಾಲುದಾರರಿಗೆ ಸಹ ಅನುಮತಿ ನೀಡುತ್ತೇವೆ.

ನಿಮ್ಮ ಮಗುವಿನ ವೈಯಕ್ತಿಕ ಮಾಹಿತಿಗೆ ಆ್ಯಕ್ಸೆಸ್

ನಿಮ್ಮ ಮಗುವಿನ ಬಳಿ Google ಖಾತೆಯಿದ್ದರೆ, ಅವರ Google ಖಾತೆಗೆ ನೀವು ಸೈನ್ ಇನ್ ಮಾಡುವ ಮೂಲಕ ನಿಮ್ಮ ಮಗುವಿನ ಮಾಹಿತಿಯ ಪ್ರಕ್ರಿಯೆಗೊಳಿಸುವಿಕೆಯನ್ನು ಪ್ರವೇಶಿಸಬಹುದು, ಅಪ್‌ಡೇಟ್ ಮಾಡಬಹುದು, ತೆಗೆದುಹಾಕಬಹುದು, ರಫ್ತು ಮಾಡಬಹುದು ಮತ್ತು ನಿರ್ಬಂಧಿಸಬಹುದು. ನಿಮ್ಮ ಮಗುವಿನ ಪಾಸ್‌ವರ್ಡ್ ನಿಮಗೆ ನೆನಪಿಲ್ಲದಿದ್ದರೆ, ನೀವು ಅದನ್ನು Family Link ಆ್ಯಪ್ ಅಥವಾ ವೆಬ್‌ನಲ್ಲಿನ Family Link ಸೆಟ್ಟಿಂಗ್‌ಗಳ ಮೂಲಕ ರೀಸೆಟ್ ಮಾಡಬಹುದು. ಒಮ್ಮೆ ಸೈನ್ ಇನ್ ಮಾಡಿದ ನಂತರ, ನಿಮ್ಮ ಮಗುವಿನ ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಮಾಹಿತಿಯನ್ನು ನಿರ್ವಹಿಸಲು ನೆರವಾಗಲು Google ಗೌಪ್ಯತಾ ನೀತಿಯಲ್ಲಿ ವಿವರಿಸಿರುವ Google ಚಟುವಟಿಕೆ ನಿಯಂತ್ರಣಗಳಂತಹ ಅನೇಕ ಕಂಟ್ರೋಲ್‌ಗಳನ್ನು ನೀವು ಬಳಸಬಹುದು.

ನಿಮ್ಮ ಮಗುವಿನ ಬಳಿ ಪ್ರೊಫೈಲ್ ಇದ್ದರೆ, Family Link ಆ್ಯಪ್ ಮೂಲಕ ಅಥವಾ ವೆಬ್‌ನಲ್ಲಿನ Family Link ಸೆಟ್ಟಿಂಗ್‌ಗಳ ಮೂಲಕ ನಿಮ್ಮ ಮಗುವಿನ ಮಾಹಿತಿಯನ್ನು ನೀವು ಪ್ರವೇಶಿಸಬಹುದು, ಅಪ್‌ಡೇಟ್ ಮಾಡಬಹುದು, ತೆಗೆದುಹಾಕಬಹುದು, ರಫ್ತು ಮಾಡಬಹುದು ಮತ್ತು ನಿರ್ಬಂಧಿಸಬಹುದು.

ನಿಮ್ಮ ಮಗುವಿಗೆ “ನನ್ನ ಚಟುವಟಿಕೆ”ಯಲ್ಲಿ ತಮ್ಮ ಹಿಂದಿನ ಚಟುವಟಿಕೆಯನ್ನು ಅಳಿಸುವ ಮತ್ತು ಡೀಫಾಲ್ಟ್ ಆಗಿ, ಥರ್ಡ್ ಪಾರ್ಟಿಗಳಿಗೆ ಆ್ಯಪ್ ಅನುಮತಿಗಳನ್ನು (ಸಾಧನದ ಸ್ಥಳ, ಮೈಕ್ರೋಫೋನ್ ಅಥವಾ ಸಂಪರ್ಕಗಳಂತಹ ಮಾಹಿತಿಯೂ ಸೇರಿದಂತೆ) ನೀಡುವ ಸಾಮರ್ಥ್ಯವಿರುತ್ತದೆ. ನಿಮ್ಮ ಮಗುವಿನ Google ಖಾತೆ ಅಥವಾ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು ಅಥವಾ ಮಾರ್ಪಡಿಸಲು, ಆ್ಯಪ್ ಚಟುವಟಿಕೆ ಮತ್ತು ಆ್ಯಪ್ ಅನುಮತಿಗಳನ್ನು ಪರಿಶೀಲಿಸಲು ಮತ್ತು ನಿಮ್ಮ ಮಗುವಿನ ಮಾಹಿತಿಯನ್ನು ಪ್ರವೇಶಿಸುವ ಸಲುವಾಗಿ ಆ್ಯಪ್‌ಗಳು ಅಥವಾ ಥರ್ಡ್ ಪಾರ್ಟಿಯ ಸೇವೆಗಳಿಗೆ ಕೆಲವು ಅನುಮತಿಗಳನ್ನು ನೀಡುವ ನಿಮ್ಮ ಮಗುವಿನ ಸಾಮರ್ಥ್ಯವನ್ನು ನಿರ್ವಹಿಸಲು ಕೂಡಾ ನೀವು Family Link ಅನ್ನು ಬಳಸಬಹುದು.

ನಿಮ್ಮ ಮಗುವಿನ ಮಾಹಿತಿಯ ಹೆಚ್ಚಿನ ಸಂಗ್ರಹಣೆ ಮತ್ತು ಬಳಕೆಯನ್ನು ನೀವು ಯಾವುದೇ ಸಮಯದಲ್ಲಿ ನಿಲ್ಲಿಸಲು ಬಯಸಿದರೆ, ನಿಮ್ಮ ಮಗುವಿನ ಖಾತೆಯಲ್ಲಿ ಅಥವಾ Family Link ಆ್ಯಪ್‌ನಲ್ಲಿರುವ ಪ್ರೊಫೈಲ್‌ನ ಮಾಹಿತಿ ಪುಟದಲ್ಲಿ ಅಥವಾ ವೆಬ್‌ನಲ್ಲಿನ Family Link ಸೆಟ್ಟಿಂಗ್‌ಗಳಲ್ಲಿ "ಖಾತೆಯನ್ನು ಅಳಿಸಿ" ಅಥವಾ "ಪ್ರೊಫೈಲ್ ಅಳಿಸಿ" ಎಂಬುದನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಮಗುವಿನ Google ಖಾತೆ ಅಥವಾ ಪ್ರೊಫೈಲ್ ಅನ್ನು ನೀವು ಅಳಿಸಬಹುದು. ನಿಮ್ಮ ಮಗುವಿನ ಖಾತೆ ಅಥವಾ ಪ್ರೊಫೈಲ್‌ನ ಮಾಹಿತಿಯನ್ನು ಸೂಕ್ತ ಸಮಯದ ಒಳಗಾಗಿ ಶಾಶ್ವತವಾಗಿ ಅಳಿಸಲಾಗುತ್ತದೆ.

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮಗುವಿನ Google ಖಾತೆ ಅಥವಾ ಪ್ರೊಫೈಲ್ ಕುರಿತು ಯಾವುದಾದರೂ ಪ್ರಶ್ನೆಗಳಿದ್ದರೆ, ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಸಹಾಯ ಮಾಡಲು ನಾವು ಇಲ್ಲಿದ್ದೇವೆ. Family Link ಮತ್ತು ನಿಮ್ಮ ಮಗುವಿನ Google ಖಾತೆ ಅಥವಾ ಪ್ರೊಫೈಲ್‌ನ ಕುರಿತಾದ ಹೆಚ್ಚುವರಿ ಮಾಹಿತಿಯನ್ನು ನಮ್ಮ ಸಹಾಯ ಕೇಂದ್ರದಲ್ಲಿ ನೀವು ಕಾಣಬಹುದು. ನೀವು ಮೆನು ☰ > ಸಹಾಯ ಮತ್ತು ಪ್ರತಿಕ್ರಿಯೆ > ಪ್ರತಿಕ್ರಿಯೆ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ಅಥವಾ ಕೆಳಗಿನ ವಿಳಾಸದಲ್ಲಿ ಇಲ್ಲವೇ ಇಮೇಲ್ ಮುಖಾಂತರ ನಮ್ಮನ್ನು ಸಂಪರ್ಕಿಸುವ ಮೂಲಕ ಸಹ Family Link ಬಗ್ಗೆ ಅಥವಾ ನಿಮ್ಮ ಮಗುವಿನ Google ಖಾತೆ ಅಥವಾ Family Link ಆ್ಯಪ್‌ನಲ್ಲಿನ ಪ್ರೊಫೈಲ್‌ನ ಕುರಿತು ನಮಗೆ ಪ್ರತಿಕ್ರಿಯೆ ಕಳುಹಿಸಬಹುದು.

Google
1600 Amphitheatre Parkway
Mountain View, CA 94043 USA
ಫೋನ್: +1 855 696 1131 (USA)
ಇತರ ದೇಶಗಳಿಗಾಗಿ, g.co/FamilyLink/Contact ಗೆ ಭೇಟಿ ನೀಡಿ

Google ನಿಮ್ಮ ಮಗುವಿನ ಡೇಟಾವನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದರ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ನೀವು Google ಮತ್ತು ನಮ್ಮ ಡೇಟಾ ರಕ್ಷಣಾ ಕಚೇರಿಯನ್ನು ಸಂಪರ್ಕಿಸಬಹುದು. ಸ್ಥಳೀಯ ಕಾನೂನಿನ ಅಡಿಯಲ್ಲಿ ನಿಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಆತಂಕಗಳಿದ್ದಲ್ಲಿ, ನಿಮ್ಮ ಸ್ಥಳೀಯ ಡೇಟಾ ರಕ್ಷಣಾ ಪ್ರಾಧಿಕಾರವನ್ನು ಸಹ ನೀವು ಸಂಪರ್ಕಿಸಬಹುದು.

Google Apps
ಪ್ರಮುಖ ಮೆನು